ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ಹೊಟ್ಟೆ ನೋವು, ತಲೆನೋವು, ಕಾಲುನೋವುಗಳಂತ ಸಮಸ್ಯೆಗಳು ಉಂಟಾಗುತ್ತದೆ ಹಾಗೂ ಈ ಸಮಯದಲ್ಲಿ ಮೂಡ್ ಸ್ವಿಂಗ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ಮಹಿಳೆಯರಿಗೆ ಏನಾದರೂ ತಿನ್ನಬೇಕು ಅನ್ನೋ ಆಸೆಯಾಗುತ್ತದೆ.
ಹೆಚ್ಚಿನ ಮಹಿಳೆಯರು ಮಸಾಲೆ ಮತ್ತು
ಹುಳಿ ಆಹಾರವನ್ನು ತಿನ್ನಲು ಬಯಸುತ್ತಾರೆ ಆದರೆ ಮುಟ್ಟಿನ ಸಮಯದಲ್ಲಿ ಅನಾರೋಗ್ಯಕರ ಮತ್ತು ಮಸಾಲೆಯುಕ್ತ
ಆಹಾರವನ್ನುಸೇವಿಸಬಾರದು. ಏಕೆಂದರೆ ಅದರಿಂದ ನೋವು ಮತ್ತು ಸೆಳೆತ ಹೆಚ್ಚಾಗುತ್ತದೆ. ಅಷ್ಟಕ್ಕು ಋತುಚಕ್ರದ
ಸಮಯದಲ್ಲಿ ಯಾವ ಆಹಾರಗಳನ್ನು ಸೇವಿಸಲೇಬಾರದು ಅನ್ನೋದನ್ನು ತಿಳಿಯೋಣ.
ಮಸಾಲೆ ಆಹಾರ:
ಋತುಚಕ್ರದ ಸಮಯದಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಸೆಳೆತ ಉಂಟಾಗುತ್ತದೆ.
ಅಲ್ಲದೇ ಹೊಟ್ಟೆ ನೋವು, ಅತಿಸಾರ ಮತ್ತು ವಾಕರಿಕೆ ಉಂಟಾಗುತ್ತದೆ. ಪಿರಿಯಡ್ಸ್ ಸಮಯದಲ್ಲಿ ಪೋಷಕಾಂಶ-ಭರಿತ
ಆಹಾರವನ್ನು ತೆಗೆದುಕೊಳ್ಳಬೇಕು. ಇದರಿಂದ ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೆಂಪು ಮಾಂಸ:
ಮುಟ್ಟಿನ ಸಮಯದಲ್ಲಿ ದೇಹವು ಪ್ರೊಸ್ಟಗ್ಲಾಂಡಿನ್‌ಗಳನ್ನು ಉತ್ಪಾದಿಸುತ್ತದೆ. ಇದು ಗರ್ಭಾಶಯದ ಸಂಕೋಚನಕ್ಕೆ
ಸಹಾಯ ಮಾಡುತ್ತದೆ. ದೇಹದಲ್ಲಿ ಪ್ರೊಸ್ಟಗ್ಲಾಂಡಿನ್ಗಳು ಹೆಚ್ಚಾದಾಗ ಸೆಳೆತವನ್ನು ಉಂಟುಮಾಡಬಹುದು.
ಕೆಂಪು ಮಾಂಸದ ಸೇವನೆಯು ನೋವನ್ನು ಹೆಚ್ಚಿಸುತ್ತದೆ. ರೆಡ್‌ಮೀಟ್‌ನಲ್ಲಿ ಕಬ್ಬಿಣಾಂಶ ಹೆಚ್ಚಿದ್ದು
ಇದು ಪ್ರೋಸ್ಟಗ್ಲಾಂಡಿನ್‌ಗಳ ಮಟ್ಟವನ್ನು ಹೆಚ್ಚಿಸುತ್ತದೆ.
ಮದ್ಯ ಸೇವನೆ:
ಋತುಚಕ್ರದ ಸಮಯದಲ್ಲಿ ಮದ್ಯ ಸೇವನೆಯು ದೇಹದ ಮೇಲೆ ಅನೇಕ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.
ಈ ಸಮಯದಲ್ಲಿ ಆಲ್ಕೋಹಾಲ್ ಸೇವನೆಯು ತಲೆನೋವು ಮತ್ತು ಉಬ್ಬುವಿಕೆಗೆ ಕಾರಣವಾಗಬಹುದು. ಇದು ಅತಿಸಾರ
ಮತ್ತು ವಾಕರಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು.
ಋತುಚಕ್ರದ ಸಮಯದಲ್ಲಿ ಹೆಚ್ಚು ಉಪ್ಪು ಹಾಕಿದ ಆಹಾರವನ್ನು ಸೇವಿಸಬಾರದು. ಹೆಚ್ಚು ಉಪ್ಪು ತಿಂದರೆ ಬಾಯಾರಿಕೆ
ಆಗುತ್ತದೆ. ಇದು ಹೊಟ್ಟೆ ಉಬ್ಬುವುದಕ್ಕೆ ಕಾರಣವಾಗಬಹುದು. ಊತವನ್ನು ಕಡಿಮೆ ಮಾಡಲು ಆಹಾರದಲ್ಲಿ ಉಪ್ಪಿನ
ಬಳಕೆಯನ್ನು ಕಡಿಮೆ ಮಾಡಬೇಕು. ಈ ಸಮಯದಲ್ಲಿ ವಿಶೇಷವಾಗಿ ಸಂಸ್ಕರಿಸಿದ ಆಹಾರ ಮತ್ತು ಪ್ಯಾಕ್ ಮಾಡಿದ
ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಯಾಕಂದ್ರೆ ಇದ್ರಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಅಂಶವಿರುತ್ತದೆ.
ಸಕ್ಕರೆ:
ಋತುಚಕ್ರದ ಸಮಯದಲ್ಲಿ ಸಕ್ಕರೆಯನ್ನು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಸಕ್ಕರೆಯ ಹೆಚ್ಚಿನ ಬಳಕೆಯು
ಹೆಚ್ಚಿನ ಶಕ್ತಿಯ ಮಟ್ಟಗಳಿಗೆ ಕಾರಣವಾಗಬಹುದು ಮತ್ತು ಇದು ಕೆಟ್ಟ ಮನಸ್ಥಿತಿಗೆ ಕಾರಣವಾಗಬಹುದು. ಋತುಚಕ್ರದ
ಸಮಯದಲ್ಲಿ ದುಃಖ ಮತ್ತು ಆತಂಕಗಳಾಗೋದು ಸಹಜ. ಕಡಿಮೆ ಪ್ರಮಾಣದ ಸಕ್ಕರೆಯನ್ನು ಸೇವಿಸುವುದರಿಂದ ಮೂಡ್
ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.